ಮಂಗಳೂರು: ಫೆ.18 ರಂದು ಸಚಿವ ಸತೀಶ್ ಜಾರಕಿಹೊಳಿ ಮಂಗಳೂರಿಗೆ ಆಗಮಿಸುತ್ತಿದ್ದು, ನೆಹರು ವಿಚಾರ ವೇದಿಕೆ ಮಂಗಳೂರು ಇದರ ವತಿಯಿಂದ “ಸ್ವಾತಂತ್ರ್ಯ-ಸಂವಿಧಾನ-ದೂರದೃಷ್ಟಿ” ಎಂಬ ವಿಷಯದಲ್ಲಿ ವಿಚಾರಗೊಷ್ಠಿಯು ಫೆ.18ರಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ರಮಾನಾಥ ರೈ ವಹಿಸಿಕೊಳ್ಳಲಿದ್ದಾರೆ.
ಗಾಂಧಿ ಮತ್ತು ಸ್ವಾತಂತ್ರ್ಯ ಎಂಬ ವಿಷಯದಲ್ಲಿ ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ ವಿಚಾರ ಮಂಡಿಸಲಿದ್ದು, ಅಂಬೇಡ್ಕರ್ ಮತ್ತು ಸಂವಿಧಾನ ವಿಷಯದಲ್ಲಿ
ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಹಾಗೂ ನೆಹರು ಮತ್ತು ದೂರದೃಷ್ಟಿ ವಿಷಯದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಂಡಿಸಲಿದ್ದಾರೆ.
ನಾಸಿರ್ ಹುಸೇನ್, ರಾಜ್ಯ ಸಭಾ ಸದಸ್ಯರು, ಟಿ. ಬಿ. ಜಯಚಂದ್ರ, ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿಗಳು, ಮಂಜುನಾಥ ಭಂಡಾರಿ, ವಿಧಾನಪರಿಷತ್ ಸದಸ್ಯರು, ಕಾರ್ಯಾಧ್ಯಕ್ಷರು, ಕೆ.ಪಿ.ಸಿ.ಸಿ., ಅಶೋಕ್ ರೈ ಕೋಡಿಂಬಾಡಿ, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ, ಸಂದೀಪ್ ಬಿ.ಎಂ., ಎ.ಐ.ಸಿ.ಸಿ. ಕಾರ್ಯದರ್ಶಿ, ನವದೆಹಲಿ, ಹರೀಶ್ ಕುಮಾರ್. ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಗಳೂರು, ಡಾ| ಯು.ಟಿ. ಇಫ್ತಿಕಾರ್ ಫರೀದ್, ಅಧ್ಯಕ್ಷರು, ರಾಜ್ಯ ಅಲೈಡ್ & ಹೆಲ್ತ್ ಕೇರ್ ಕೌನ್ಸಿಲ್, ಬೆಂಗಳೂರು, ಪಿ.ವಿ.ಮೋಹನ್, ಎ.ಐ.ಸಿ.ಸಿ. ಕಾರ್ಯದರ್ಶಿ, ನವದೆಹಲಿ, ಅನಂತ ನಾಯ್ಕ, ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ಬೆಂಗಳೂರು, ಮುನೀರ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ, ಸಿಪಿಐ(ಎಮ್) ಸಹಿತ ಇನ್ನಿತರ ಹಲವು ಗಣ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
