March 22, 2026

ಮನವಿಗೆ ಸ್ಪಂದಿಸಿ ಪರಿಹಾರದ ಭರವಸೆ ನೀಡಿದ ಇಲಾಖೆ

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆ ಸಹಿತ ಆಲಡ್ಕ, ಮೆಲ್ಕಾರ್ ಮೊದಲಾದೆಡೆ ಚರಂಡಿ ವ್ಯವಸ್ಥೆ ಅಲ್ಲಲ್ಲಿ ರಸ್ತೆ ದುರಸ್ತಿ ಹಾಗೂ ಶುಚೀಕರಣಕ್ಕಾಗಿ ಕಾಯುತ್ತಿದ್ದು, ಪುರಸಭಾಧ್ಯಕ್ಷರು ಮತ್ತು ಪಿ. ಡಬ್ಲ್ಯು ಇಲಾಖೆಗೆ
ಈ ಬಗ್ಗೆ ಶೀಘ್ರ ಗಮನ ಹರಿಸಿ ಪರಿಹಾರ ಕಲ್ಪಿಸುವಂತೆ ಪಾಣೆಮಂಗಳೂರು 24 ನೇ ವಾರ್ಡ್ ನ ಸದಸ್ಯರಾದ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಮನವಿ ನೀಡಿದ್ದರು.

ಮನವಿಗೆ ಸ್ಪಂದಿಸಿದ ಪಿ. ಡಬ್ಲ್ಯು ಇಂಜಿನಿಯರ್ ಜಯಪ್ರಕಾಶ್ ಹಾಗೂ ಅರುಣ್ ಜಂಟಿಯಾಗಿ ಪೇಟೆಯ ರಸ್ತೆಯ ಪರಿಶೀಲನೆ ನಡೆಸಿದರು. ಬಳಿಕ ಪಾಣೆಮಂಗಳೂರು ಅಲಡ್ಕ ಮೇಲ್ಕಾರ್ ರಸ್ತೆಗೆ ಮರುಡಾಮರೀಕರಣ ಹಾಗೂ ಚರಂಡಿಯ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದಾಗಿ ಭರವಸೆ ನೀಡಿದರು.

ಪಾಣೆಮಂಗಳೂರು ಪೇಟೆಯಿಂದ ಆಲಡ್ಕ ಮಾರ್ಗವಾಗಿ ಮೆಲ್ಕಾರ್ ವರೆಗೆ ಚರಂಡಿ ವ್ಯವಸ್ಥೆ ಇದ್ದರೂ ಅಲ್ಲಲ್ಲಿ ಕುಸಿತ ಉಂಟಾಗಿ ದುರಸ್ತಿ ತುರ್ತು ಅವಶ್ಯಕತೆ ಇದೆ. ಅಲ್ಲದೆ ಚರಂಡಿ ನೀರು ಸೋರಿಕೆಯಾಗಿ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿಯುತ್ತಿರುವ ಸಮಸ್ಯೆಯಿಂದಾಗಿ ದುರ್ನಾತ ಬೀರುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರುವ ಬಗ್ಗೆ ಭೀತಿ ಎದುರಾಗಿದ್ದು, ಪುರಸಭಾಡಳಿತ ಹಾಗೂ ಆರೋಗ್ಯಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಆಗ್ರಹಿಸಿದ್ದರೆ.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ, ಅಬ್ದುರ‌್ರಹ್ಮಾನ್ ಮೆಲ್ಕಾರ್‌, ಅಝರ್ ಅಲಡ್ಕ . ಇಕ್ಬಾಲ್ ಬಂಗ್ಲೆಗುಡ್ಡೆ, ಅನ್ಸರ್ ಬಂಗ್ಲೆಗುಡ್ಡೆ, ಉಪಸ್ಥಿತರಿದ್ದರು.