ರಾಣೆ ಬೆನ್ನೂರು : ಇಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಾಗೂ ಟಿ-55 “ಶಿವಶಕ್ತಿ” ಯುದ್ಧ ಟ್ಯಾಂಕರ್ ನ್ನು ಪ್ರತಿಷ್ಠಾಪನೆ ಮಾಡಿ ಮಾತನಾಡಿದ ಯು.ಟಿ.ಖಾದರ್, “ಇದು ಪ್ರತಿಷ್ಠಾಪನಾ ಮಹೋತ್ಸವ ಮಾತ್ರವಲ್ಲ, ಬದಲಾಗಿ ನಮ್ಮ ಯೋಧರ ಅಚಲ ಧೈರ್ಯ, ನಿಸ್ವಾರ್ಥ ಸೇವೆ, ಮತ್ತು ತ್ಯಾಗಕ್ಕೆ ನಾವು ತಲೆಬಾಗಿ ಸಲ್ಲಿಸುವ ಗೌರವವಾಗಿದೆ*,ನಮ್ಮ *ಸೇನೆಯ ಅಪ್ರತಿಮ ಪರಾಕ್ರಮದ ಸಂಕೇತವಾಗಿ, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಧೈರ್ಯ, ಶಕ್ತಿ, ದೇಶಭಕ್ತಿ, ಸೇವಾಮನೋಭಾವ, ಸಮರ್ಪಣೆ ಮತ್ತು ತ್ಯಾಗದ ಜ್ಯೋತಿಯು ಸದಾ ಉರಿಯಲು ಪ್ರೇರೇಪಿಸುವ* ಒಂದು ಸಂಕಲ್ಪವಾಗಿದೆ.



ಈ ಯುದ್ಧದಲ್ಲಿ ಟಿ–55 “ಶಿವಶಕ್ತಿ” ಯುದ್ಧ ಟ್ಯಾಂಕರ್ ಭಾರತೀಯ ಭೂಸೇನೆಯ ಪ್ರಮುಖ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿತ್ತು. ಆ ಕಾಲಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದ ಈ ಟ್ಯಾಂಕರ್, ತನ್ನ ವೇಗ, ದಿಟ್ಟತನ ಮತ್ತು ಅತಿ ನಿಖರವಾದ ಗುಂಡಿನ ದಾಳಿಯಿಂದ ಶತ್ರುಗಳ ಮೇಲೆ ಭಯ ಹುಟ್ಟಿಸಿತು ಮತ್ತು ವಿಜಯದ ಮುಖ್ಯ ರೂವಾರಿಯಾಗಿತ್ತು. ಆದ್ದರಿಂದ ಇದು ಸ್ವಾತಂತ್ರ್ಯ ದಿನಾಚರಣೆ ಈ ಶುಭ ಸಂಧರ್ಭದಲ್ಲಿ ಸ್ಮರಿಸಲೇಬೇಕಾದ ಮಹತ್ವದ ವಿಚಾರ ಮತ್ತು ಸಂಕೇತವಾಗಿದೆ.

ಶ್ರೀ ಪ್ರಕಾಶ್ ಕೆ ಕೋಳಿವಾಡ ಇವರು ಈ ಟಿ-55 ಶಿವಶಕ್ತಿ ಯುದ್ಧ ಟ್ಯಾಂಕರನ್ನು ಇಲ್ಲಿ ಪ್ರತಿಷ್ಠಾಪಿಸಿ ಈ ರಾಣೆ ಬೆನ್ನೂರಿನ ಗೌರವವನ್ನು ಹೆಚ್ಚಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ರಾಣೆ ಬೆನ್ನೂರು ಒಂದು ಜನಾಕರ್ಷಣೆಯ ಕೇಂದ್ರವಾಗಿ ಪ್ರವಾಸಿಗರನ್ನು ಸೆಳೆಯುವ ಒಂದು ಪ್ರಮುಖ ಸ್ಥಳವಾಗಿ ರೂಪುಗೊಳ್ಳಲಿದೆ ಎಂದು ಯು.ಟಿ.ಖಾದರ್ ತಮ್ಮ ಭಾಷಣದಲ್ಲಿ ತಿಳಿಸಿದರು.

