February 4, 2026
IMG-20250915-WA0146

ಪುತ್ತೂರು: ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಮೇಕ್ ಎ ಚೇಂಜ್ ಫೌಂಡೇಶನ್ ತನ್ನ ಪುತ್ತೂರುಬ್ಲಾಕ್ ಸಮೀತಿಯನ್ನು ಶುಕ್ರವಾರ ಸಂಜೆ ಪುತ್ತೂರು ಪೆವಿಲಿಯನ್ ಪ್ರೆಸ್ಟೀಜ್ ಹಾಲ್ ನಲ್ಲಿ ಭವ್ಯವಾಗಿ ರಚಿಸಲಾಯಿತು.

ಕಾರ್ಯಕ್ರಮವನ್ನು ಗೌರವಾನ್ವಿತ ಸುಹೈಲ್ ಕಂದಕ್ ಅವರ ನೇತೃತ್ವದಲ್ಲಿ ಬಾತೀಶ್ ಅಳಕೆಮಜಲು ಹಾಗೂ ಹಲವು ಗಣ್ಯರ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾಜ ಸೇವೆಯ ಹಾದಿಯಲ್ಲಿ ಯುವಶಕ್ತಿಯ ಪಾತ್ರವನ್ನು ಮೆಚ್ಚಿ ಶ್ಲಾಘಿಸಲಾಯಿತು. ಹೊಸ ಸಮೀತಿಯ ಮೂಲಕ ಶಿಕ್ಷಣ, ಪ್ರೇರಣೆ, ಸೇವೆ ಮತ್ತು ಸಾಮಾಜಿಕ ಜಾಗೃತಿ ಕ್ಷೇತ್ರಗಳಲ್ಲಿ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಫೌಂಡೇಶನ್‌ನ ಉದ್ದೇಶಗಳು ಹಾಗೂ ಭವಿಷ್ಯದ ಯೋಜನೆಗಳನ್ನು ಹೃದಯಂಗಮವಾಗಿ ವಿವರಿಸಿದರು. ಯುವಕರ ಒಗ್ಗಟ್ಟು ಮತ್ತು ಬೆಂಬಲವೇ ನಿಜವಾದ ಬದಲಾವಣೆಗೆ ದಾರಿ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು.

ಈ ಸಂದರ್ಭದಲ್ಲಿ ವಿವಿಧ ಸಮಾಜ ಸೇವಕರು, ಸಂಘಟನೆಯ ಸದಸ್ಯರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.