ಮಂಗಳೂರು: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಫಳ್ನೀರ್‌ನಲ್ಲಿ ಬುಧವಾರ ನಡೆದಿದೆ.

ಶಹೀಮ್ ಉತ್ತಮ ಬ್ಯಾಡ್ಮಿಂಟನ್ ಕ್ರೀಡೆಪಟ್ಟುವಾಗಿದ್ದು ನಿನ್ನೆ ಮಧ್ಯಾಹ್ನದಿಂದ ಸಂಜೆವರಗೆ ನಿರಂತರವಾಗಿ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ.
ಅಟ್ಟಾವರ್ ಐವರಿ ಟವರ್ ನಿವಾಸಿಯಾಗಿದ್ದ ಮತ್ತು ಅಡ್ಡೂರು ಮೂಲದ ಶರೀಫ್ ಅವರ ಪುತ್ರ ಶಹೀಮ್ (20) ಮೃತ ಯುವಕ.
ಗೆಳೆಯರೊಂದಿಗೆ ಆಡುತ್ತಿದ್ದಾಗ ಶಹೀಮ್ ಅವರು ಏಕಾಏಕಿ ಕೋರ್ಟ್ ಮೇಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶಹೀಮ್ ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿದ್ದರು.
