March 26, 2026
IMG-20251016-WA0088

ಬಂಟ್ವಾಳ: ಎರಡನೇ ಮದುವೆಯಾಗಲು ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ನಡೆಸಿದ ಬಂಟ್ವಾಳ ಮೂಲದ ತಂಡವೊಂದು ಆತನಿಂದ 45 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಕುರಿತು ಸಂತ್ರಸ್ತನಿಗೆ ಆರೋಪಿಗಳಿಂದ ನಿರಂತರ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಕೂಡ ಗಲ್ಫ್ ಉದ್ಯಮಿ ಕೇರಳದ ತಾವರಕಡನ್ ಮೂಲದ ಮಹಮ್ಮದ್ ಅಶ್ರಫ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಿಯಾಝ್, ಮುಸ್ತಫಾ ಬಂದರ್, ಸಫಿಯಾ ಮಾಣಿ, ಸರಪುದ್ದೀನ್, ವಿಟ್ಲ ಹಸೈನಾರ್ ವಿರುದ್ಧ ಸಂತ್ರಸ್ತ ದೂರು ನೀಡಿದ್ದಾರೆ.

ಸಂತ್ರಸ್ತ ನೀಡಿರುವ ದೂರಿನಲ್ಲಿ, ನನ್ನ ಫೋನ್ ನಂಬರಿಗೆ ಬೇರೆ ಬೇರೆ ವ್ಯಕ್ತಿಗಳು ಕರೆ ಮಾಡಿ ಈ ಪ್ರಕರಣದಿಂದ ಆರೋಪಿಗಳನ್ನು ಕೈಬಿಡಬೇಕು ಮತ್ತೊಂದು ಕರೆಯಲ್ಲಿ ನಿಮ್ಮನ್ನು ನಾವು ಹೊರಗಡೆ ನೋಡುತ್ತೇವೆ, ಆರೋಪಿಗಳನ್ನು ಕೈ ಬಿಡಿ ಅವರು ಮಗ್ಧರು. ಈ ರೀತಿ ನನ್ನಲ್ಲಿ ಹೇಳಿದ್ದಾರೆ.

ಸೇಫಿಯಾ ಮಾಣಿ ಎಂಬ ಆರೋಪಿ ಈ ರೀತಿ ಕರೆ ಮಾಡಿ ಕೇಸ್ ವಪಾಸು ಪಡೆಯದಿದ್ದರೆ ವೀಡಿಯೋ, ಫೋಟೋ ಅವರ ಜಮಾತಿಗೆ ಅವರ ಪತ್ನಿ ಸಂಬಂಧಿಕರಿಗೆ ನೀಡುತ್ತೇನೆ, ಬಳಿಕ ನನ್ನ ಸಹೋದರನಿಗೆ ಕರೆ ಮಾಡಿ ಕಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನನ್ನ ಸಹೋದರ ಕೇರಳದಲ್ಲಿ ದೂರು ನೀಡಿದ್ದಾರೆ.ನನಗೆ ಈ ಮೇಲಿನ ನಂಬರ್ ನಿಂದ ಬೆದರಿಕೆ ಕರೆ ಬರುತ್ತಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮತ್ತು ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.