March 20, 2026
image (48)

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಮೂರು ಮೊಬೈಲ್, ಸಿಮ್, ಚಾರ್ಜರ್ ಮೊದಲಾದವುಗಳು ಪತ್ತೆಯಾಗಿವೆ.

ಜೈಲು ಅಧೀಕ್ಷಕ ಶರಣಬಸಪ್ಪ ಅವರು ಜ.14ರಂದು ತಡರಾತ್ರಿ 10.55ರಿಂದ 11.50ರ ನಡುವೆ ಜೈಲಿನ ಅಧಿಕಾರಿ ಮತ್ತು ಸಿಬಂದಿಯೊಂದಿಗೆ ಕಾರಾಗೃಹದ ಒಳಗಡೆ ತಪಾಸಣೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ‘ಎ‘ ವಿಭಾಗದ 3ನೇ ಕೊಠಡಿಯಲ್ಲಿ ಸಿಮ್ ಸಹಿತ ವೀವೋ ಮೊಬೈಲ್ ಫೋನ್, ಕಪ್ಪು ಬಣ್ಣದ ಎಚ್ ಡಿಎಂ ಕೀ ಪ್ಯಾಡ್ ಮೊಬೈಲ್ ಮತ್ತು ಸಿಮ್, ಮೊಬೈಲ್ ಚಾರ್ಜರ್ ಅಡಪ್ಟರ್, 2 ಚಾರ್ಜರ್ ಕೇಬಲ್ ಪತ್ತೆಯಾಗಿದೆ. ‘ಬಿ‘ ವಿಭಾಗದ 5ನೇ ಕೊಠಡಿಯಲ್ಲಿ ಕಂದು ಬಣ್ಣದ ನೋಕಿಯಾ ಕೀ ಪ್ಯಾಡ್ ಮೊಬೈಲ್ ಸಿಕ್ಕಿದೆ.

ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.