February 4, 2026
Screenshot_20250917_194438_Drive

ಸೆಪ್ಟೆಂಬರ್ 21ರಂದು “ಮೇಕ್ ಎ ಚೇಂಜ್ ಫೌಂಡೇಶನ್” ವತಿಯಿಂದ ಉಳ್ಳಾಲ ಬೀಚ್ ಸ್ವಚ್ಚತಾ ಕಾರ್ಯ

ಉಳ್ಳಾಲ: “ಮೇಕ್ ಎ ಚೇಂಜ್ ಫೌಂಡೇಶನ್” ವತಿಯಿಂದ ಪರಿಸರ ಜಾಗೃತಿ ಮತ್ತು ಸಮುದ್ರ ತೀರದ ಸಂರಕ್ಷಣೆಯ ಭಾಗವಾಗಿ ಉಳ್ಳಾಲ ಬೀಚ್‌ನಲ್ಲಿ ವಿಶೇಷ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಸ್ವಚ್ಚತಾ ಅಭಿಯಾನ ಸೆಪ್ಟೆಂಬರ್ 21, 2025 (ಭಾನುವಾರ) ಬೆಳಗ್ಗೆ 6:30 ಕ್ಕೆ  ಉಳ್ಳಾಲ ಬೀಚ್‌ನಲ್ಲಿ ನಡೆಯಲಿದೆ.

ಸ್ಥಳೀಯ ನಾಗರಿಕರು, ವಿದ್ಯಾರ್ಥಿಗಳು, ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಿಸರ ಶುದ್ಧಿಕರಣಕ್ಕೆ ಕೈಜೋಡಿಸಲಿದ್ದಾರೆ.

ಪರಿಸರವನ್ನು ಸ್ವಚ್ಛಗೊಳಿಸಿ, ಜೀವನವನ್ನು ಸುಂದರಗೊಳಿಸಿ..ಎಂಬ ಸಂದೇಶವನ್ನು ಹರಡುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿದೆ. ಸಮುದ್ರ ತೀರದ ಪರಿಸರವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿಭಾಯಿಸಬೇಕು ಎಂದು ಮೇಕ್ ಎ ಚೇಂಜ್ ಫೌಂಡೇಶನ್ ಸ್ಥಾಪಕರಾದ ಸುಹೈಲ್ ಕಂದಕ್‌ ರವರು ಕರೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಲ್ಲರ ಸಹಭಾಗಿತ್ವ ಬೇಕಿದೆ. ಉಳ್ಳಾಲ ಬೀಚ್ ಸ್ವಚ್ಚ ಮತ್ತು ಸುಂದರವಾಗಿರಲಿ ಎಂದು ಅವರು ಹೇಳಿದ್ದಾರೆ.