February 4, 2026
IMG-20251017-WA0308

ಉಳ್ಳಾಲ : ತಾಲಿಬಾನ್ ವಿದೇಶಾಂಗ ಸಚಿವರ ಭೇಟಿಯ ವೇಳೆ, ಮಹಿಳಾ ಪತ್ರಕರ್ತರನ್ನು ಹೊರಗಿಟ್ಟು “ಪುರುಷರಿಗೆ ಮಾತ್ರ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನೀಡಿದ ಕೇಂದ್ರ ಸರ್ಕಾರದ ನಡೆಯನ್ನು ಉಳ್ಳಾಲ ವಲಯ ಮಹಿಳಾ ಕಾಂಗ್ರೆಸ್ ತೀವವಾಗಿ ಖಂಡಿಸಿದೆ.

“ನಮ್ಮ ದೇಶದ ಪ್ರಜಾಪ್ರಭುತ್ತ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳು ವಿಶ್ವಕ್ಕೆ ಮಾದರಿಯಾಗಬೇಕು. ಬೇರೆ ದೇಶದ ಪ್ರತಿನಿಧಿಗಳು ಯಾರೇ ಭಾರತಕ್ಕೆ ಬಂದರೂ, ಅವರು ತಾಲಿಬಾನ್ ಧೋರಣೆ ಅಥವಾ ಸರ್ವಾಧಿಕಾರಿ ನಿಲುವು ಹೊಂದಿರಬಹುದು, ಆದರೆ ಭಾರತದಿಂದ ಅವರು ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನೂ ಕಲಿಯಬೇಕು, ಅದಕ್ಕೆ ವಿರುದ್ಧವಾಗಿ, ಅವರು ಇಲ್ಲಿ ಬಂದಾಗ, ನಾವು ಅವರ ನೀತಿಗೆ ಮಣಿಯಬಾರದು. ಈ ಘಟನೆ ಭಾರತದ ಸಂವಿಧಾನ, ಮೂಲಭೂತ ಮೌಲ್ಯಗಳು, ಮತ್ತು ಮಹಿಳೆಯರಿಗೆ ಮಾಡಿರುವ ಅವಮಾನವಾಗಿದೆ. ಈ ಅವಮಾನದ ದಿವಸವನ್ನು ಈ ದೇಶದ ಮಹಿಳೆಯರು ಯಾವತ್ತೂ ಮರೆಯುವುದಿಲ್ಲ.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ರಾಜ್ಯ ಪದಾಧಿಕಾರಿ ಸುರೇಖಾ ಚಂದ್ರಹಾಸ, ನಗರಾಧ್ಯಕ್ಷ ಅಮಿತ ಅಶ್ವಿನ್ ಪೂಜಾರಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಉಪಾಧ್ಯಕ್ಷೆ ಸಪ್ಪಾ ಹರೀಶ್, ರಝಿಯಾ ಇಬ್ರಾಹಿಂ ಕಾರ್ಮಿಕ ಅಧ್ಯಕ್ಷೆ ಪ್ರಭಾವತಿ ಶೆಟ್ಟಿ, ತುಳಸಿ ಗಟ್ಟಿ ಕೋಟೆಕಾರ್, ರೇವತಿ ಕುಂಪಲ, ದೇವಕಿ ಪೂಜಾರಿ, ಜೇಸಿಂತ ಮಂಡೋನ್ನ, ವೀಣಾ ಶಾಂತಿ, ಭಾರತಿ, ದೀಕ್ಷಿತಾ ಶಾಲಿನಿ ಶೆಟ್ಟಿ,ಚಂಚಲಕ್ಷ್ಮಿ ಕೊಣಾಜೆ ಮತ್ತು ಅನೇಕರು ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದಾರೆ.