March 18, 2026
Screenshot_20250518_235210_Picsart

ಬಂಟ್ವಾಳ :ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟೀಯ ಹೆದ್ದಾರಿ 66 ನೇತ್ರಾವತಿ ಸೇತುವೆ ಬಳಿ ಇಂದು ರಾತ್ರಿ ನಡೆದಿದೆ.

ಬೈಕ್ ಸವಾರನು ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್ ಒಂದರಲ್ಲಿ ಆಹಾರ ಮುಗಿಸಿ ಹಿಂತಿರುಗಿ ಹೋಗುವಾಗ ಮಂಗಳೂರು ನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಡಿಕ್ಕಿಯಾಗುತ್ತಿದ್ದಂತೆಯೇ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತನ ಕುರಿತು ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತ ಸಂಭವಿಸಿದ ಪರಿಣಾಮ ಫುಲ್ ಟ್ರಾಫಿಕ್​ಜಾಮ್ ಆಗಿದೆ. ವಾಹನಗಳು ಸುಮಾರು ಕಿಲೋ ಮೀಟರ್​​ವರೆಗೆ ಸಾಲುಗಟ್ಟಿನಿಂತಿವೆ.