March 24, 2026
IMG-20250818-WA0145

ಪುತ್ತೂರು: ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್‌ ಆನ್‌ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ.

ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿನಿ, ಕಡಬ ತಾಲ್ಲೂಕಿನ ಕಾಣಿಯೂರು ಗ್ರಾಮದ ಬೈತಡ್ಕ ನಿವಾಸಿ ಇಸ್ಮಾಯಿಲ್– ಝಹ್ರಾ ಜಾಸ್ಮಿನ್ ದಂಪತಿ ಪುತ್ರಿ ಸಜ್ಲಾ ಈ ಸಾಧನೆ ಮಾಡಿದವರು.

ಸಜ್ಲಾ ಸುಮಾರು 5 ವರ್ಷ ಪರಿಶ್ರಮದಿಂದ ಇದನ್ನು ಸಾಧಿಸಿದ್ದಾರೆ. 2021ರ ಜನವರಿಯಲ್ಲಿ ಬರವಣಿಗೆ ಆರಂಭಿಸಿ, 2025ರ ಆಗಸ್ಟ್‌ನಲ್ಲಿ ಪೂರ್ಣಗೊಳಿಸಿದ್ದಾರೆ.

ಒಂದು ಪುಟ ಬರೆಯಲು 4 ಗಂಟೆ ಬೇಕಾಗುತ್ತಿತ್ತು. ಕೆಲವು ದಿನ 8 ಗಂಟೆ ಬಳಸಿ 2 ಪುಟ ಬರೆದಿದ್ದೇನೆ. 302 ದಿನದಲ್ಲಿ (2,416 ಗಂಟೆ) ಈ ಕಾರ್ಯ ಪೂರ್ಣಗೊಳಿಸಿದ್ದೇನೆ ಎಂದು ಸಜ್ಲಾ ಇಸ್ಮಾಯಿಲ್ ಅವರು ಪ್ರತಿಕ್ರಿಯಿಸಿದರು.