February 4, 2026
IMG-20240916-WA0137

ಉಳ್ಳಾಲ :ಯುವ ಕಾಂಗ್ರೆಸ್ ಚುನಾವಣೆ ಪಲಿತಾಂಶಕ್ಕೆ ಇನ್ನೇನು ಬೆರಳೆಣಿಕೆಯಷ್ಟು ದಿನ ಬಾಕಿ ಉಳಿದಿದ್ದು ಅಭ್ಯರ್ಥಿಗಳ ಪ್ರಚಾರ ಅಬ್ಬರದಿಂದ ಸಾಗುತ್ತಿದೆ.

ಇನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ರಕ್ಷಿತ್ ಪೂಜಾರಿ ಬಹಳ ಹುಮ್ಮಸ್ಸುನಿಂದ ತಮ್ಮ ಕ್ಷೇತ್ರದಲ್ಲಿ ಸಂಚರಿಸಿ, ಯುವಕರನ್ನು ಒಗ್ಗೂಡಿಸಿ ತಮ್ಮ ಪ್ರಚಾರದಲ್ಲಿ ತೊಡಗಿದ್ದಾರೆ.


ಯುವಕರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿರುವ ಇವರು, ಯುವ ಪಡೆಯನ್ನು ರಾಜಕೀಯ ನೆಲೆಯಲ್ಲಿ ಸಂಘಟಿಸುವ ಹಂಬಲವನ್ನು ಹೊಂದಿರುವ ವ್ಯಕ್ತಿತ್ವವು ಇವರದು ಪ್ರಶಂಸನೀಯವಾಗಿದೆ.

ತನ್ನ ಗುರುಗಳು, ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯು.ಟಿ ಖಾದರ್ ರವರ ನಿರ್ದೇಶನದಂತೆ ಕೋವಿಡ್-19 ಮಹಾಮಾರಿಯ ವೇಳೆ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ ರಕ್ಷಿತ್ ಪೂಜಾರಿ ಸಾವಿರಾರು ಕಾರ್ಮಿಕರಿಗೆ ಎರಡು ಹೊತ್ತಿನ ಊಟದ ಸೌಲಭ್ಯ ಸಿಗುವಂತೆ ಮಾಡಿದರು. ಅಲ್ಲದೇ, ಡಾ.ಯು.ಟಿ.ಇಫ್ತಿಕರ್ ರವರ ಸಲಹೆ ಮತ್ತು ನೆರವಿನಿಂದ ವೈದ್ಯಕೀಯವಾಗಿ ಸಹಾಯ ಕೂಡ ಮಾಡಿದ್ದವರು.

ಬಿಜೆಪಿ ಭದ್ರಕೋಟೆಯಾದ ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಇವರು ಅಲ್ಪ ಪ್ರಮಾಣದ ಮತಗಳಿಂದ ಪರಾಜಯಗೊಂಡಿದ್ದರೂ ಜನ ಸೇವೆಯನ್ನು ಈಗಲೂ ಕೂಡ ನಡೆಸುತ್ತಿದ್ದಾರೆ.
ಪ್ರಸ್ತುತ ರಕ್ಷಿತ್ ಪೂಜಾರಿ ಯವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

ಈ ಬಾರಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕ್ರಮ ಸಂ:1 ರಲ್ಲಿ ರಕ್ಷಿತ್ ಪೂಜಾರಿ ಸ್ಪರ್ಧಿಸುತ್ತಿದ್ದಾರೆ.

ಇವರು ಈ ಬಾರಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಅಭ್ಯರ್ಥಿಯಾಗಿ ಕಂಡುಬಂದಿದೆ.