ಮಂಗಳೂರು: ಉರ್ವಾ ಸ್ಟೋರ್ ಅಶೋಕ್ ನಗರದ ಬಾಲಪ್ರತಿಭೆ ಝೊಹಾನ್ ಓಝಿಲ್, ಅಪೂರ್ವ ಸಾಧನೆಯ ಮೂಲಕ ಟ್ರಿಪಲ್ ರೆಕಾರ್ಡ್ ಹೋಲ್ಡರ್ ಆಗಿ ಗುರುತಿಸಿಕೊಂಡಿದ್ದು, ತಮ್ಮ ಅಸಾಧಾರಣ ಪ್ರತಿಭೆ ಮತ್ತು ವಿಶಿಷ್ಟ ಸಾಧನೆಗಳಿಗಾಗಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮೂರು ಪ್ರಮುಖ ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಝೊಹಾನ್ ಓಝಿಲ್ ಅವರಿಗೆ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “Super Talented Kid – One in a Million” ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದೊರಕಿದೆ. ವಿಶೇಷವಾಗಿ ಪ್ರತಿಷ್ಠಿತ ನೋಬೆಲ್ ವರ್ಲ್ಡ್ ರೆಕಾರ್ಡ್ ಅನ್ನು ಪಡೆಯುವ ಮೂಲಕ ಜೋಹಾನ್, ಅಪರೂಪದ ಸಾಧನೆ ಮಾಡಿದ್ದಾರೆ.
ಅಶೋಕ ನಗರ ನಿವಾಸಿಗಳಾದ ಮಹಮ್ಮದ್ ತನ್ಜೀಲ್ ಮತ್ತು ತಾಯಿ ಮೆಹ್ರೋಜ್ ದಂಪತಿಗಳ ಪುತ್ರರಾದ ಜೋಹಾನ್ ಓಜಿಲ್ ಅವರ ಈ ಸಾಧನೆ, ಕುಟುಂಬಕ್ಕೆ ಮಾತ್ರವಲ್ಲದೆ ಮಂಗಳೂರು ನಗರಕ್ಕೂ ಹೆಮ್ಮೆಯನ್ನು ತಂದುಕೊಟ್ಟಿದ್ದು, ಅತಿ ಕಿರಿಯ ವಯಸ್ಸಿನಲ್ಲೇ ತಮ್ಮ ಪ್ರತಿಭೆಯ ಮೂಲಕ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಜೋಹಾನ್ ಅವರ ಸಾಧನೆಯನ್ನು ಶಿಕ್ಷಣ ಕ್ಷೇತ್ರ, ಸಾಮಾಜಿಕ ವಲಯ ಹಾಗೂ ಸಾರ್ವಜನಿಕ ವಲಯದ ಗಣ್ಯರು ಶ್ಲಾಘಿಸಿದ್ದಾರೆ.
