February 4, 2026
Screenshot_20251020_150450_WhatsAppBusiness

ಬಂಟ್ವಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಪುತ್ತೂರಿಗೆ ತೆರಳುವ ಸಂದರ್ಭದಲ್ಲಿ ಫರಂಗಿಪೇಟೆಯ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಅವರನ್ನು ಸ್ವಾಗತಿಸಿದರು.

ಫರಂಗಿಪೇಟೆ ಸಿಎಂ ಕಾರಿನಿಂದ ಇಳಿದು ಗೌರವ ಸ್ವೀಕರಿಸಿ ಜತೆಗೆ ಮನವಿಯನ್ನೂ ಅವರಿಗೆ ನೀಡಲಾಯಿತು. ಜಿ.ಪಂ.ಮಾಜಿ ಸದಸ್ಯರಾದ ಉಮ್ಮರ್ ಫಾರೂಕ್, ಚಂದ್ರಪ್ರಕಾಶ್ ಶೆಟ್ಟಿ, ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮೇರಮಜಲು ಗ್ರಾ.ಪಂ.ಮಾಜಿ ಅಧ್ಯಕ್ಷೆ ವೃಂದಾ ಪೂಜಾರಿ ಮೊದಲಾದವರಿದ್ದರು.