February 4, 2026
IMG-20251021-WA0388

ಪುತ್ತೂರು: ವಿಟ್ಲ ಗ್ಯಾಂಗ್ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಗಲ್ಫ್ ಉದ್ಯಮಿಗೆ ವಂಚಿಸಿದ ಆರೋಪಿ ಮಿಸ್ರಿಯಾ ವಿರುದ್ಧ ಸ್ವತಃ ಪತಿ ಸಬೀರ್ ದೂರು ನೀಡಿದ್ದಾನೆ.

ಪತಿ ಕೊಟ್ಟ ದೂರಿನಲ್ಲಿ ಏನಿದೆ?

8-10-2020ರಂದು ಆಯಿಶಾತುಲ್ ಮಿಸ್ರಿಯಾಳನ್ನು ನಾನು ಮದುವೆಯಾಗಿದ್ದೆ. ಬಳಿಕ ನಮಗೆ ಹೆಣ್ಣು ಮಗು ಜನಿಸಿದೆ. ಈಗ ಆಕೆಗೆ ನಾಲ್ಕುವರೆ ವರ್ಷ. ನಂತರ ನಮ್ಮ ನಡುವೆ ಭಿನ್ನಾಭಿಪ್ರಾಯ ಬಂದಿದ್ದು, ಆಕೆ ನನ್ನನ್ನು ತೊರೆದು ತವರು ಮನೆ ಸೇರಿದಳು. ಆ ಬಳಿಕ ಆಕೆ ಬೇರೆ ಬೇರೆ ಗಂಡಸರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಅಲ್ಲದೆ ಬಶೀರ್ ಎಂಬುವವನ ಜೊತೆ ಸೇರಿಕೊಂಡು ವ್ಯಭಿಚಾರ ವೃತ್ತಿ ಮಾಡುತ್ತಿದ್ದಾಳೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ದಾಖಲಾಗಿದೆ. ಈ ರೀತಿ ಮಾಡುತ್ತಿರುವುದರಿಂದ ನನ್ನ ಮಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ವ್ಯಭಿಚಾರ ಮಾಡುವ ನನ್ನ ಹೆಂಡತಿ ವಿರುದ್ಧ ಸೂಕ್ತ ಕ್ರಮ ಕೊಳ್ಳಬೇಕೆಂದು ದೂರಿ‌ನಲ್ಲಿ ತಿಳಿಸಿದ್ದಾರೆ.