ಮಂಗಳೂರು: ಉಳ್ಳಾಲ ತಾಲೂಕಿನ ಪಾವೂರು ಗ್ರಾಮದಲ್ಲಿರುವ ಖಾಲಿದ್-ಬಿನ್-ವಲೀದ್ ಮಸ್ಜಿದ್ ಮಲಾರ್ ಜಂಕ್ಷನ್ ಇದರ ಗೌರವಾನ್ವಿತ ಅಧ್ಯಕ್ಷರಾದ ಜನಾಬ್ ಅಬ್ದುಲ್ ಮಜೀದ್ ಮಾಸ್ಟರ್ ಅವರ ನಿಧನ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಖಾಲಿದ್-ಬಿನ್-ವಲೀದ್ ಮಸ್ಜಿದ್ ಮಲಾರ್ ಜಂಕ್ಷನ್ ಇದರ ಆಡಳಿತ ಸಮಿತಿಯ ನಾಯಕರು ಹೇಳಿದರು.ಹಿರಿಯ ಪ್ರಾರ್ಥಮಿಕ ಶಾಲೆ ಗಾಡಿಗದ್ದೆ ಪಾವೂರು ಇದರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುವ ಇವರು ಧಾರ್ಮಿಕವಾಗಿ SMF , SYS ಹಾಗೂ SKSSF ನಲ್ಲಿ ಕಾರ್ಯಚರಿಸುತ್ತಿದ್ದರು. ಕಳೆದ ಸಾಲಿನಲ್ಲಿ ರಾಜ್ಯ ಸರಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದರು. ಖಾಲಿದ್-ಬಿನ್-ವಲೀದ್ ಮಸ್ಜಿದ್ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು ಸದ್ರಿ ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.ಇವರಿಗೆ 55 ವಯಸ್ಸಾಗಿದ್ದು ,ಊರಿನವರಿಗೆ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದಾರೆ.ಇವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ ತಿಳಿಸಿದ್ದಾರೆ.ಮಸ್ಜಿದ್ ಗೌರವಾಧ್ಯಕ್ಷರಾದ ಸಯ್ಯಿದ್ ಇಬ್ರಾಹಿಂ ಬಾದುಶಾ ತಂಙಳ್ ಅಲ್-ಬುಖಾರಿ ಆನೆಕಲ್ಲು , ಉಪಾಧ್ಯಕ್ಷರಾದ ಇರ್ಫಾನ್ ಡಿ , ಹಮೀದ್ ಪಿ , ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ , ಜತೆ ಕಾರ್ಯದರ್ಶಿ ಇಮ್ತಿಯಾಝ್ ಬಿ , ಕೋಶಾಧಿಕಾರಿ ಅಝೀಝ್ ಮೇಸ್ತ್ರಿ , ಸದಸ್ಯರಾದ ಅಬ್ದುಸ್ಸಮದ್ ಕೆ.ಎಂ , ಹಾಜಿ ಹಸನ್ ಬಾವ ಎಚ್.ಎಚ್ , ಖಾದರ್ ಪಿ , ಯಹ್ಯಾ ಅರಸ್ತಾನ , ಹನೀಫ್ ಕುಂಜತ್ತೂರು , ಅನ್ವರ್ ಕೆ.ಎಂ , ಕರೀಮ್ ಮೌಲವಿ , ಅಶ್ರಫ್ ಫೈಝಿ ಎಂ.ಐ , ಕರೀಮ್ ಪದವು , ಹೈದರ್ ಪದವು ಹಾಗೂ SKSSF ಮಲಾರ್ ಕ್ಲಸ್ಟರ್ ತೀವ್ರ ಸಂತಾಪ ಸೂಚಿಸಿದ್ದಾರೆ.

