ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್ ಕಟ್ಟೆಯಲ್ಲಿ ಬುಧವಾರ ಅಪರಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ 1 ಬಸ್, 1 ಲಾರಿ ಮತ್ತು 3 ಕಾರುಗಳು ಜಖಂಗೊಂಡಿವೆ.

ಕೆಎಸ್ಸಾರ್ಟಿಸಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಎದುರಿನಲ್ಲಿದ್ದ ಲಾರಿಗೆ ಢಿಕ್ಕಿ ಹೊಡೆಯಿತು. ಲಾರಿ ಅದರ ಎದುರಿದ್ದ ಕಾರಿಗೆ, ಬಳಿಕ ಆ ಮೂರು ಕಾರುಗಳು ಹಿಂದಿನಿಂದ ಒಂದಕ್ಕೊಂದು ಪರಸ್ಪರ ಢಿಕ್ಕಿಯಾದವು. ಯಾರಿಗೂ ಗಾಯವಾಗಿಲ್ಲ. ಬಸ್ ಮತ್ತು ಎರಡು ಕಾರುಗಳಿಗೆ ಹೆಚ್ಚು ಹಾನಿಯಾಗಿದೆ. ಹೆದ್ದಾರಿಯಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಯಿತು.
