ಮಂಗಳೂರು: ನಗರದ ಕಂಕನಾಡಿಯ ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಓಪನ್ ಕರಾಟೆ ಚಾಂಪಿಯನ್‌ಶಿಪ್ ಅಂಡರ್ 14 ವಿಭಾಗದಲ್ಲಿ ಮುಹಮ್ಮದ್ ಅಯಾನ್ ಎರಡು ಪಂದ್ಯಾಕೂಟದಲ್ಲಿ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.


ಮೊಹಮ್ಮದ್ ಅಯಾನ್
ಕಟಾ ಪಂದ್ಯಾಟದಲ್ಲಿ ದ್ವೀತಿಯ ಹಾಗೂ ಕುಮಿಟೆಯಲ್ಲೂ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.
ಮುಹಮ್ಮದ್ ಅಯಾನ್ ಹೋಲಿ ಸ್ಪಿರಿಟ್ ಸ್ಕೂಲ್ ಮುಕ್ಕ ದ ವಿದ್ಯಾರ್ಥಿಯಾಗಿದ್ದು, ಇವರು ಆಸೀಫ್ ಹಾಗೂ ರೇಶ್ಮಾ ದಂಪತಿಯ ಪುತ್ರರಾಗಿದ್ದಾರೆ.
ಇವರ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.
