ವಿಟ್ಲ : ಇ ಡಿ ಅಧಿಕಾರಿ ಎಂದು ನಂಬಿಸಿ ಸಿಂಗಾರಿ ಬೀಡಿ ಮಾಲಿಕರ ಮನೆ ದರೋಡೆ ಪ್ರಕರಣ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ರಿಂದ ಅಂತರಾಜ್ಯ ದರೋಡೆಕೋರನ ಬಂಧನ, ಕಾರು,ನಗದು ವಶ ಪಡಿಸಿಕೊಂಡಿದ್ದಿರೆ.

ದಿನಾಂಕ;03-01-2025 ರಂದು ರಾತ್ರಿ ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್ ಠಾಣಾ ಸರಹದ್ದಿನ ಬೋಳಂತೂರು ಗ್ರಾಮದ ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಮಾಲಕರಾದ ಹಾಜಿ ಎನ್ ಸುಲೈಮಾನ್ ಎಂಬವರ ಮನೆಗೆ 06 ಜನ ಅಪರಿಚಿತರು ಇ ಡಿ ಅಧಿಕಾರಿಗಳೆಂದು ನಂಬಿಸಿ ಮನೆಯ ಶೋಧನೆ ನಡೆಸಿ ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಎರ್ಟಿಗಾ ಕಾರಿನಲ್ಲಿ ಪರಾರಿಯಾಗಿದ್ದರು ಇದರ ಬಗ್ಗೆ ಸಿಂಗಾರಿ ಬೀಡಿ ಮಾಲಿಕರ ಮಗ ಮಹಮ್ಮದ್ ಇಕ್ಬಾಲ್ ರವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 02/2025 ರಂತೆ ದೂರು ದಾಖಲಾಗಿದ್ದು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ ಅಧಿಕಾರಿ ಹಾಗೂ ಅಪರಾಧ ಸಿಬ್ಬಂದಿಗಳ ವಿಶೇಷ ನಾಲ್ಕು ತಂಡ ರಚಿಸಿ ಅಪರಾಧಿಗಳ ಪತ್ತೆ ಬಗ್ಗೆ ಪ್ರಯತ್ನಿಸಲಾಗಿತ್ತು.
ಇಂದು23-01-2025 ರಂದು ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖಾ ತಂಡವು ಅನಿಲ್ ಫರ್ನಾಂಡಿಸ್ ಪ್ರಾಯ 49 ವರ್ಷ ತಂದೆ:ಯಸುದಾಸ್ ವಾಸ:ಯಸುದಾಸ್ ಲಿಯೋನ್ ಫರ್ನಾಂಡಿಸ್ , ಟ್ರಿನಿಟಿ ವಿಲ್ಲಾ ಚಿರಕರ್ ಜಂಕ್ಷನ್ ಮಾತಿಲಿಲ್ ಅಂಚೆ, ತ್ರಿಕ್ಕಡವೂರ್ ,ಪೆರಿನಾಡ್, ಕೊಲ್ಲಂ ಜಿಲ್ಲೆ ಕೇರಳ ರಾಜ್ಯ ಹಾಲಿವಾಸ:ಪಲವಿಲ್ಲ ಮನೆ, ಮಾತಿಲಿಲ್, ಅಂಚೆ ತ್ರಿಕ್ಕಡವೂರ್ ಪೆರಿನಾಡ್, ಕೊಲ್ಲಂ ಜಿಲ್ಲೆ ಕೇರಳ ರಾಜ್ಯ ಎಂಬ ಆರೋಪಿಯನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಕೃತ್ಯಕ್ಕೆ ಉಪಯೋಗಿಸಿದ KL-02-BP-1104ನೇ ನೊಂದಣಿ ನಂಬ್ರದ ಎರ್ಟಿಗಾ ಕಾರು, 5,00,000/-ರೂ ನಗದು ಹಾಗೂ ನಕಲಿ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ TN-20-DB-5517ನೇ ನಂಬರ ಪ್ಲೇಟ್‌ನ್ನು ವಶಪಡಿಸಿಕೊಂಡಿದ್ದು. ಸ್ವಾದೀನಪಡಿಸಿಕೊಂಡ ನಗದು ಹಾಗೂ ವಾಹನದ ಒಟ್ಟು ಮೌಲ್ಯ- 11,00,000/- ರೂ ಆಗಬಹುದು. ಸದ್ರಿ ಪ್ರಕರಣದಲ್ಲಿ ಆರೋಪಿತನನ್ನು ವಿಚಾರಿಸಲಾಗಿ ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದು ದಸ್ತಗಿರಿಗೆ ಬಾಕಿ ಇರುತ್ತದೆ.
ಸದ್ರಿ ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ ಶ್ರೀ ಯತೀಶ್ ಎನ್ ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಡಿ ಎಸ್ ರವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್. ವಿಜಯ ಪ್ರಸಾದ್ ರವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ನಾಗರಾಜ್ ಹೆಚ್ ಈ ರವರ ನೇತ್ರತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ ಎಂ ಎಂ, ಕೌಶಿಕ್ ಬಿ ಸಿ, ಹರೀಶ್ ಕುಮಾರ್, ರಾಮಕೃಷ್ಣ ,ವಿದ್ಯಾ ಕೆ.ಜೆ. ರತ್ನಕುಮಾರ,ಸಿಬ್ಬಂಧಿಗಳಾದ, ಪ್ರವೀಣ್ ಮೂರುಗೋಳಿ, ಉದಯ ರೈ, ರಕ್ಷಿತ್ ರೈ ಕೆ, ಅದ್ರಾಂ, ಕರುಣಾಕರ, ರಾಹುಲ್ ರಾವ್, ಶ್ರೀಧರ ಸಿ ಎಸ್, ರಾಧಾಕೃಷ್ಣ, ನಝೀರ್, ಇರ್ಷಾದ್ ಪಿ, ವಿನಾಯಕ ಬಾರ್ಕಿ, ರಂಜಾನ್,ಶಂಕರ ಸಂಶಿ, ಗದಿಗೆಪ್ಪ, ಮಂಜುನಾಥ,ಅಶೋಕ್, ವಿವೇಕ್ ಕೆ, ಕುಮಾರ್ ಹೆಚ್.ಕೆ, ಉಮೇಶ್,ಚಿದಾನಂದ,ಸಂಪತ್, ದಿವಾಕರ್, ಸಂತೋಷ್ ,ಕುಮಾರ್ ಮಾಯಪ್ಪರವರು ಭಾಗವಹಿಸಿರುತ್ತಾರೆ. ಸದ್ರಿ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿರುತ್ತಾರೆ.
