ಉಪ್ಪಿನಂಗಡಿ: ಹನ ಪಾನೀಯ ಹೊತ್ತೊಯ್ಯುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿಯ ಸತ್ತಿಕಲ್ಲು ಬಳಿ ನಡೆದಿದೆ.


ಬೆಳಿಗ್ಗೆ 8 ಗಂಟೆಗೆ ಲಾರಿ ಪಲ್ಟಿಯಾಗಿದ್ದು, ಚಾಲಕ ಇರ್ಫಾನ್ ಗೂಡಿನಬಳಿ ಅಲ್ಪ ಗಾಯವಾಗಿದೆ. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದಾಗ ಸ್ಥಳೀಯರು ಸಹಾಯ ಮಾಡಿದ್ದು, ಪಾನೀಯವನ್ನು ಲಾರಿಗೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.

