February 4, 2026
fakenews-dp-1640945455

ಬಂಟ್ವಾಳ: “ಸಜಿಪ ದೇರಾಜೆ ರಸ್ತೆಯ ಮಧ್ಯೆ ಯುವಕರಿಬ್ಬರ ಮೇಲೆ ದಾಳಿಗೆ ಯತ್ನ, ಘಟನಾ ಸ್ಥಳದಲ್ಲಿ ಸೇರಿದ ಜನರಿಂದ ಆಕ್ರೋಶ” ಎಂಬುದಾಗಿ ”ಮುಸ್ಲಿಂ ಯುವ ಬಳಗ” ಎಂಬ ಹೆಸರಿನ ವಾಟ್ಸಪ್ ಗ್ರೂಪಿನಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ Ziyad Ummi ಎಂಬ ಹೆಸರಿನ ವ್ಯಕ್ತಿಯೋರ್ವನ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.21ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ:73/2025 ಕಲಂ: 125 ಬಿ ಎನ್ ಎಸ್ ಪ್ರಕರಣದ ಘಟನೆಗೆ ಸಂಬಂಧಿಸಿದಂತೆ, “ಮುಸ್ಲಿಂ ಯುವ ಬಳಗ” ಎಂಬ ಹೆಸರಿನ ವಾಟ್ಸಾಪ್ ಗ್ರೂಪಿನಲ್ಲಿ Ziyad Ummi ಎಂಬ ಹೆಸರಿನ ವ್ಯಕ್ತಿಯೋರ್ವ “ಸಜಿಪ ದೇರಾಜೆ ರಸ್ತೆಯ ಮಧ್ಯೆ ಯುವಕರಿಬ್ಬರ ಮೇಲೆ ದಾಳಿಗೆ ಯತ್ನ, ಘಟನಾ ಸ್ಥಳದಲ್ಲಿ ಸೇರಿದ ಜನರಿಂದ ಆಕ್ರೋಶ” ಎಂಬುದಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ ಸಾರ್ವಜನಿಕರಿಗೆ ಭಯ ಭೀತಿಯನ್ನುಂಟು ಮಾಡಿದ ಆರೋಪದಲ್ಲಿ Ziyad Ummi ಎಂಬ ಹೆಸರಿನಲ್ಲಿ ಸಂದೇಶ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂಬ್ರ : 74/2025, ಕಲಂ: 240 BNS ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.