February 4, 2026
p4vwYk8q_400x400

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಆನಂದ‌ ನ್ಯಾಮಗೌಡ ಹೇಳಿಕೆ..!

ಬಾಗಲಕೋಟೆ: ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರ ಅಶ್ಲೀಲ ವಿಡಿಯೋ ಇರುವ ಸಿಡಿ ಬಿಡುಗಡೆಯಾಗಲಿದೆ ಎಂದು ಮಾಜಿ ಶಾಸಕ ಆನಂದ‌ ನ್ಯಾಮಗೌಡ ಹೇಳಿದ್ದಾರೆ.

ಬಾಗಲಕೋಟೆಯ ಜಮಖಂಡಿ ‌ನಗರದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶನಿವಾರ ಮಾತನಾಡಿದ ಅವರು, ಇವತ್ತೊಂದು ಹೊಸ ಸುದ್ದಿ ಬಂದಿದೆ. ನೀವು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಇವತ್ತೇ ಆ ಸುದ್ದಿ ಕೇಳಿದ್ದೇನೆ. ಅದೇನಪ್ಪಾ ಅಂದರೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಅವರ ಒಂದು ಅಶ್ಲೀಲ‌ ಸಿಡಿ ಹೊರಗೆ ಬರೋದಿದೆ ಎಂದರು.

ಆ ಅಶ್ಲೀಲ‌ ಸಿಡಿ ಭಾರತೀಯ ಜನತಾ ಪಾರ್ಟಿಯವನದ್ದೇ. ಬಿಜೆಪಿ ಮಾಜಿ ‌ಮುಖ್ಯಮಂತ್ರಿಯ ಅಶ್ಲೀಲ ಸಿಡಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ನ್ಯಾಮಗೌಡ ಹೇಳಿದ್ದಾರೆ.