March 20, 2026
IMG-20251124-WA0007

ಬಂಟ್ವಾಳ: ಕಲ್ಲಡ್ಕ- ವಿಟ್ಲ ರಸ್ತೆಯ ಬೋಳಂತೂರು ಕ್ರಾಸ್‌ ಬಳಿ ಗೂಡ್ಸ್‌ ವಾಹನದಲ್ಲಿ ಸಂಚಾರ ಉಲ್ಲಂ ಸಿ ಕಬ್ಬಿಣದ ರಾಡ್‌ ಸಾಗಿಸಿ ಅವುಗಳು ರಸ್ತೆಗೆ ಚೆಲ್ಲಿದ್ದ ಪ್ರಕರಣದ ವೀಡಿಯೋ ಆಧರಿಸಿ ಸಂಚಾರ ಪೊಲೀಸರು ವಾಹನ ಚಾಲಕನ ವಿರುದ್ಧ ದಂಡ ವಿಧಿಸಿದ್ದಾರೆ.

ಗೂಡ್ಸ್‌ ವಾಹನದಲ್ಲಿ ಕಬ್ಬಿಣದ ರಾಡ್‌(ಸ್ಕಾ éರ್‌ಟ್ಯೂಬ್‌)ಗಳನ್ನು ಬೋಳಂತೂರು ಭಾಗದಿಂದ ಕಲ್ಲಡ್ಕ ಭಾಗಕ್ಕೆ ಸಾಗಿಸಲಾಗುತ್ತಿದ್ದು, ವಾಹನವು ಏರು ರಸ್ತೆಯಲ್ಲಿ ವಿಟ್ಲ ರಸ್ತೆಗೆ ಸೇರುವಲ್ಲಿ ಒಂದು ಭಾಗದಲ್ಲಿ ಕಟ್ಟಿದ್ದ ರಾಡ್‌ ಗಳು ಏಕಾಏಕಿ ಕೆಳಗೆ ಬಿದ್ದಿದೆ.

ಈ ಕುರಿತ ವೀಡಿಯೋ ಹಿಂದಿನ ವಾಹನದ ಕೆಮರಾದಲ್ಲಿ ರೆಕಾರ್ಡ್‌ ಆಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಕುರಿತು ಪೊಲೀಸರು ವಾಹನ ಚಾಲಕನ ವಿರುದ್ಧ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದು, ಈ ಕುರಿತು ವಾಹನ ಚಾಲಕರು ಜಾಗೃತರಾಗಬೇಕಿದೆ. ಇಲಾಖೆಯಿಂದಲೂ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.