ಮಂಗಳೂರು: ದ.ಕ ಅಲ್ಪಸಂಖ್ಯಾತ ಘಟಕ SDPI ಪರವಾ? ಕಾಂಗ್ರೆಸ್ ಜಿಲ್ಲಾಧ್ಯಕ್ಷ BJP ಪರನಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣ ಇಂದು ನಡೆದ ಬಜಪೆ ಪಟ್ಟಣ ಪಂಚಾಯತ್ ಚುನಾವಣೆ. ಮುಸ್ಲಿಮ್ ಮತಗಳನ್ನು ಸೆಳೆಯುವಲ್ಲಿ ಅಲ್ಪಸಂಖ್ಯಾತ ಘಟಕ ವಿಫಲವಾಗಿದೆ. ಹಾಗೆಯೇ ಬಹುಸಂಖ್ಯಾತರ ಮತ ಸೆಳೆಯುವಲ್ಲಿ ದ.ಕ ಕಾಂಗ್ರೆಸ್ ಮಕಾಡೆ ಮಲಗಿದೆ.

ಈ ಹಿಂದೆ ಪಂಚಾಯತ್ ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್. ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ.
ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ -4, ಎಸ್ ಡಿ ಪಿ ಐ -3, ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಗೆ ಟಕ್ಕರ್ ಕೊಟ್ಟ ಸಿರಾಜ್ ಗೆಲುವು ಸಾಧಿಸಿದರೆ.
ಇಲ್ಲಿ ಪ್ರಮುಖ ವಿಚಾರ ಏನೆಂದರೆ ಮುಸ್ಲಿಮ್ ಮತ ಸೆಳೆಯುವಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವಿಫಲವಾಯಿತು ಎಂಬ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ಘಟಕ ಹೆಸರಿಗೆ ಮಾತ್ರ ಇರುವುದು. ಅವರು ಚುನಾವಣೆ ಬಂದರೆ ಮುಸ್ಲಿಮ್ ಬಾಹುಲ್ಯ ಕ್ಷೇತ್ರದಲ್ಲಿ ಪ್ರಚಾರ ಮಾಡಲ್ಲ ಎಂಬಾ ಆರೋಪವೂ ಇದೆ. ರಹೀಂ ಹತ್ಯೆಯ ಬಳಿಕ ರಾಜೀನಾಮೆ ಕೊಡಲು ಮುಂದಾದ ನಾಯಕರು ಆ ಬಳಿಕ ಪಕ್ಷದ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ತೊರಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಅಲ್ಲದೆ ಕೇವಲ ಹೆಸರು ಹಾಗೂ ಲಾಭಕ್ಕಾಗಿ ಮಾತ್ರ ಪಕ್ಷದ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂಬ ಮಾತು ಕೂಡ ಇದೆ. ಎಸ್‌ಡಿಪಿಐ ಅಲ್ಪಸಂಖ್ಯಾತ ವಾರ್ಡಿನಲ್ಲಿ ಪ್ರಚಾರ ಮಾಡುವಲ್ಲಿ ಈ ಅಲ್ಪಸಂಖ್ಯಾತ ಘಟಕ ಪ್ರಚಾರವೇ ಮಾಡಿಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ. ವೇದಿಕೆಯಲ್ಲಿ ರಾಜೀನಾಮೆ ನೀಡಿ ಹೆದರಿಸುವ ಬದಲು ಪಕ್ಷಕ್ಕಾಗಿ ದುಡಿಯುವಂತೆ ನೈಜ ಕಾಂಗ್ರೆಸ್ಸಿಗರು ಆಗ್ರಹಿಸಿದ್ದಾರೆ.
ಇನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ. ಎಲ್ಲ ಅಧಿಕಾರ ನೀಡಿ, ಸಾಲದಕ್ಕೆ ಸಚಿವ ಸ್ಥಾನ ನೀಡಿ ದ.ಕ ಜಿಲ್ಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ವಿಫಲರಾಗಿದ್ದಾರೆ ಎಂಬ ಮಾತು ಇದೆ. ಎಂಎಲ್ ಎ ಬಿಡಿ ಕನಿಷ್ಠ ಪಂಚಾಯತ್ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲಿ ಎಂಬಾ ಮಾತುಗಳು ಕೇಳಿ ಬರುತ್ತಿದೆ. ಬಿಜೆಪಿ ಜೊತೆ ಹೊಂದಣಿಕೆ ಮಾಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ದಕ ಜಿಲ್ಲೆಗೆ ನಿಷ್ಠಾವಂತ ನಾಯಕರ ಅಗತ್ಯವಿದೆ. ಪಕ್ಷದ ಪದಾಧಿಕಾರಿಗಳನ್ನು ಪುನರ್ ವಿಸರ್ಜಿಸಿ ಹೊಸ ನಾಯಕತ್ವಕ್ಕೆ ಅಧಿಕಾರ ನೀಡಬೇಕು. ಉತ್ಸಹಿ ಯುವಕರಿಗೆ ಜಿಲ್ಲಾ ಪದಾಧಿಕಾರಿ ಹುದ್ದೆ ನೀಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
