ಮಂಗಳೂರು: ಚಲಿಸುತ್ತಿದ್ದ ಕಾರು ಅಗ್ನಿಗಾಹುತಿಯಾದ ಘಟನೆ ರವಿವಾರ ಬೆಳಿಗ್ಗೆ ಬಿಕರ್ನಕಟ್ಟೆಯ ಕೈಕಂಬ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.

ಕಾರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನ ಬೋನೆಟ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಎನ್ನಲಾಗಿದ್ದು, ಎಲ್ಲರೂ ಹೊರಬಂದರು. ಮಳೆಯ ನಡುವೆ ಕ್ಷಣಾರ್ಧದಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟುಕರಕಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ
