ಮಂಗಳೂರು : ಬಹು ನಿರೀಕ್ಷಿತ ಅಸ್ತ್ರ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕಟ್ಟೆಮಾರ್ ಸಿನಿಮಾದ ಬಿಡುಗಡೆ ಕಾರ್ಯಕ್ರಮ ನಗರದ ಬಿಗ್ ಸಿನಿಮಾಸ್ ನಲ್ಲಿ ಶುಕ್ರವಾರ (ಜ.23) ರಂದು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತ್ತು.


ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು ಹಾಗೂ ‘ಕಾಂತಾರ’ದಲ್ಲಿ ಗುರುವ ಪಾತ್ರ ಮಾಡಿದ ಸ್ವರಾಜ್ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಟ್ಟೆಮಾರ್’ ಚಿತ್ರದಲ್ಲಿ ದೈವಾರಾಧನೆ ವಿಷಯ ಹೇಳಲಾಗುತ್ತಿದೆಯೇ? ಇಲ್ಲ. ದೈವ ಯಾವ ರೀತಿಯಲ್ಲಿ ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳುವ ಪ್ರಯತ್ನವನ್ನು ತಂಡ ಮಾಡಿದೆ. ಎಲ್ಲಿಯೂ ಆಡಂಬರವಿಲ್ಲದೆ, ದೈವಾರಾಧನೆ ತೋರಿಸದೇ ಸಿನಿಮಾ ತಯಾರಾಗಿದೆ. ತುಳುನಾಡಿನ ನಂಬಿಕೆಗಳ ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿತ್ತಿದೆ. ಈ ಚಿತ್ರದಲ್ಲಿ ಪ್ರೇಮಕಥೆ, ಸಸ್ಪೆನ್ಸ್ ವಿಷಯಗಳು ಕೂಡ ಇವೆ. ಎಲ್ಲವನ್ನು ಹದವಾಗಿ ಬೆರೆಸಿ, ಸಿನಿಮಾ ಸಿದ್ಧಪಡಿಸಲಾಗಿದೆ ಎಂಬುದು ತಂಡದ ಮಾತು.
ಸಂತೋಷ್ ಆಚಾರ್ಯ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ ಚಿತ್ರಕ್ಕಿದೆ. ವಿಶ್ವಾಸ್ ಅಡ್ಯಾರ್, ಆರ್.ಕೆ.ಮುಲ್ಕಿ, ವಿನೋದ್ ಶೆಟ್ಟಿ ಕೃಷ್ಣಾಪುರ, ಸಂದೇಶ್ ಉಕ್ಕುಡ ನಿರ್ದೇಶನ ತಂಡದಲಿದ್ದಾರೆ. ಅಸ್ತ್ರ ಪ್ರೊಡಕ್ಷನ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.
ಭಾರತ್ ಸಿನಿಮಾ ಬಿಗ್ ಬಜಾರ್‌ನಲ್ಲಿ ಕಟ್ಟೆಮಾರ್ ಕುಟುಂಬದಿಂದ 100 ಟಿಕೆಟ್‌ಗಳನ್ನು ಮನೋಜ್ ಕುಮಾರ್ ಕಟ್ಟೆಮಾರ್, ಕಿಶೋರ್ ಪೂಜಾರಿ ಕಟ್ಟೆಮಾರ್ ಮತ್ತು ಧನರಾಜ್ ಪೂಜಾರಿ ಕಟ್ಟೆಮಾರ್ ಬುಕ್ ಮಾಡಿದ್ದಾರೆ
