March 22, 2026
IMG-20250526-WA0040

ಮಂಗಳೂರು: ಪಾವೂರು ಅಭಿನಂದನಾ ಸಮಿತಿ ವತಿಯಿಂದ ಪಾವೂರು ಸೌಹಾರ್ದ ಗ್ರಾಮದ ಮೂರು ಪ್ರಮುಖ ಧರ್ಮದ ಧರ್ಮಗುರುಗಳಾದ ಶ್ರೀಮಾನ್ ಸುಬ್ರಹ್ಮಣ್ಯ ರಾವ್,ಮುಹಮ್ಮದ್ ಶಫೀಕ್ ಅಲ್ ಫಾಳಿಲ್ ಕೌಸರಿ ಹಾಗೂ ಫಾದರ್ ಮನೋಹರ್ ಡಿಸೋಜಾ ರವರನ್ನು ಸನ್ಮಾನಿಸುವುದರ ಜೊತೆಗೆ ಪ್ರಾರಂಭಗೊಂಡು ಕಳೆದ ಹಲವಾರು ವರ್ಷಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗ್ರಾಮದ ಸುಮಾರು 80 ಕ್ಕೂ ಅಧಿಕ ಮಂದಿಗೆ ಸನ್ಮಾನ ಕಾರ್ಯಕ್ರಮವು ಇನೋಳಿ ಬ್ಯಾರೀಸ್ ಕಾಲೇಜು ಬಳಿಯ ಲಾಲ್ ಪತ್ತರ್ ಅತಿಥಿ ಗೃಹದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರವರ ಶಿಫಾರಸ್ಸಿನ ಮೇರೆಗೆ,ಸಭಾಧ್ಯಕ್ಷರ ಅಧಿಕಾರಗಳನ್ನು ಮತ್ತು ನಿಯಮಗಳನ್ನು ಪರಿಶೀಲಿಸುವ ರಾಷ್ಟ್ರೀಯ ಸಮಿತಿಗೆ ನೇಮಕಗೊಂಡ ಕರ್ನಾಟಕ ವಿಧಾನಸಭಾಧ್ಯಕ್ಷರು ಹಾಗೂ ಮಂಗಳೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಯು.ಟಿ.ಖಾದರ್ ರವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವಿದ್ದರೂ ತುರ್ತು ಕೆಲಸದ ನಿಮಿತ್ತ ಸಭಾಧ್ಯಕ್ಷರು ಬೆಂಗಳೂರಿಗೆ ತೆರಳಿದ್ದರಿಂದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷರಾದ ಡಾ.ಯು.ಟಿ.ಇಫ್ತಿಕಾರ್ ಅಲಿ ರವರು ಕುಟುಂಬ ಸಮೇತ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ನಿಮಿತ್ತ ಗೌರವಿಸಿ ಬೀಳ್ಕೊಡಲಾಯಿತು.ಕಾರ್ಯಕ್ರಮದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ,ಸುರೇಖಾ ಚಂದ್ರಹಾಸ್,ಝಕರಿಯ ಮಲಾರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಶೈಲಜಾ,ಪಾವೂರು ವೈದ್ಯಾಧಿಕಾರಿ ಡಾ.ಸುನೀತಾ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ಮೋನು ರವರ ಮಾರ್ಗದರ್ಶನದಲ್ಲಿ ಪಾವೂರು ಅಭಿನಂದನಾ ಸಮಿತಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ,ಉಪಾಧ್ಯಕ್ಷರಾದ ಅಬ್ದುಲ್ ಮಜೀದ್ ಸಾತ್ಕೋ,ಪ್ರಧಾನ ಕಾರ್ಯದರ್ಶಿಗಳಾದ ಹನೀಫ್ ಕೆ ಎಂ,ಜೊತೆ ಕಾರ್ಯದರ್ಶಿ ನೋರ್ಬಾಟ್ ಡಿಸಿಲ್ವ,ಕೋಶಾಧಿಕಾರಿ ವಿವೇಕ್ ರೈ,ಸಂಚಾಲಕರಾದ ಅಲ್ತಾಫ್ ಹಾಮದ್,ಹಸನ್ ಎಂ.ಪಿ,ದಿನೇಶ್ ಪೂಜಾರಿ ಹಾಗೂ ಇರ್ಫಾನ್ ಡಿ ನೇತೃತ್ವದಲ್ಲಿ ಬೆಳಗ್ಗೆ ಸುಮಾರು ಹತ್ತು ಗಂಟೆಯಿಂದ ಸಂಜೆ ಆರರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗಿನ ತಿಂಡಿ ಚಹಾ,ಮದ್ಯಾಹ್ನದ ಊಟ,ಸಂಜೆ ಚಹಾದ ಜೊತೆಗೆ ಗ್ರಾಮಸ್ಥರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.