February 4, 2026
IMG-20260120-WA0026

ಮಂಗಳೂರು: ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ (ರಿ) ದಶಮಾನೋತ್ಸವ ಪ್ರಯುಕ್ತ ನಾಳೆ ರಾಷ್ಟ್ರ ಮಟ್ಟದ ಬೃಹತ್ ಖಿರಾಅತ್ ಸ್ಪರ್ಧೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಸಂಜೆ 5.00ಕ್ಕೆ ಮಂಗಳೂರಿನ ಇಂಡಿಯಾನ ಕನ್ವೇಶನ್ ಸೆಂಟರ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶವಿದೆ.

ಪ್ರಥಮ ಬಹುಮಾನ 1,11,111 ರೂ., ದ್ವೀತಿಯ ಬಹುಮಾನ 55,555 ರೂ., ಮತ್ತು ತೃತೀಯ ಬಹುಮಾನ 33,333 ರೂ. ನೀಡಲಾಗುವುದು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.