March 22, 2026
IMG-20251027-WA0273

ಸ್ಪೇನ್‌ನ ಇತಿಹಾಸ ಪ್ರಸಿದ್ಧ ಆಕರ್ಷಕ ಸಗ್ರಾಡಾ ಫ್ಯಾಮಿಲಿಯಾ ಬೆಸಿಲಿಕಾಗೆ ಭೇಟಿ ನೀಡಿದ ಸಭಾಧ್ಯಕ್ಷ ಶ್ರೀ ಯು.ಟಿ. ಖಾದರ್

ಇತಿಹಾಸ ಪ್ರಸಿದ್ಧ ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ,ಸಗ್ರಾಡಾ ಫ್ಯಾಮಿಲಿಯಾ ಅದ್ಭುತ ಹಾಗೂ ಆಕರ್ಷಕ ಬೆಸಿಲಿಕಾಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಶ್ರೀ ಯು.ಟಿ. ಖಾದರ್ ರವರು ಭೇಟಿ ನೀಡಿದರು.

1882ರಲ್ಲಿ ವಾಸ್ತುಶಿಲ್ಪಿ ಫ್ರಾನ್ಸಿಸ್ಕೊ ಡಿ ಪೌಲಾ ಡೆಲ್ ವಿಲ್ಲಾರ್ ಅವರ ನಿಯೋ-ಗೋಥಿಕ್ ವಿನ್ಯಾಸದೊಂದಿಗೆ ಆರಂಭವಾದ ಈ ದೇವಾಲಯಕ್ಕೆ, 1883ರಲ್ಲಿ ಆಂಟೋನಿ ಗೌಡಿಯವರು ಪ್ರಕೃತಿ, ಬೆಳಕು ಮತ್ತು ಭಾವನಾತ್ಮಕ ಸಂಕೇತಗಳ ಮೂಲಕ ಜೀವ ತುಂಬಿದರು. ಇಂದಿಗೂ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಈ ಸ್ಮಾರಕವು ಮುಂದಿನ ಹತ್ತು ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ ಎಂಬ ಮಾಹಿತಿಯಿದೆ.