February 4, 2026
IMG-20240926-WA0024

ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ವರ್ಷದ ಮಗು ನಿನ್ನೆ ಸಂಜೆ ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಮೃತಪಟ್ಟ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಂಬ್ಯುಲೆನ್ಸ್ ಚಾಲಕ ಇಮ್ರಾನ್ ಮಾರಿಪಳ್ಳ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಆಸ್ಪತ್ರೆಯಲ್ಲಿ ಅವರಿಗೆ ಬೇಕಾಗುವ ಎಲ್ಲಾ ರೀತಿಯ ಸಹಕಾರ ಮಾಡಿ ಕೊನೆಗೆ ಮೃತ ದೇಹವನ್ನು ಹಿಂದೂ ಸಂಸ್ಕಾರದೊಂದಿಗೆ ಮಾರಿಪಳ್ಳ ರುದ್ರ ಭೂಮಿಯಲ್ಲಿ ಕುಟುಂಬಸ್ಥರೊಂದಿಗೆ ನಿಂತು ಸಹಕರಿಸಿದ್ದರು. ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮ್ಲಾನ್, ಹಾಲಿ ಸದಸ್ಯ ಹಿಶಾಮ್ ಫರಂಗಿಪೇಟೆ ಮತ್ತು SKSSF ವಿಖಾಯ ತಂಡ ಇವರೊಂದಿಗೆ ಕೈ ಜೋಡಿಸಿದರು.