April 17, 2025
man-on-the-chair-in-handcuffs-rear-view-and-closeup

Man on the chair in Handcuffs. Rear view and Closeup ,Men criminal in handcuffs arrested for crimes. With hands in back,boy prison shackle in the jail violence concept.

ಮಂಗಳೂರು: ಅಕ್ರಮ ಗೋಸಾಗಾಟ ಆರೋಪದಲ್ಲಿ ಸಂಘಪರಿವಾರದ ಕಾರ್ಯಕರ್ತರು ಇಬ್ಬರಿಗೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳುವಾಯಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧಿಸಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಂಗಬೆಟ್ಟು ನಿವಾಸಿ ಅಬ್ದುಲ್ ರೆಹಮಾನ್ ಮತ್ತು ಮೂಡುಬಿದ್ರೆಯ ಕೂಸ ಪೂಜಾರಿ (56) ಹಲ್ಲೆಗೀಡಾದವರು.
ಗಿರ್ ಜಾತಿಯ ಹೋರಿಯನ್ನು ತನ್ನ ಮನೆಯಲ್ಲಿ ಬೇರೊಂದು ದನಕ್ಕೆ ಕ್ರಾಸ್ ಮಾಡುವುದಕ್ಕಾಗಿ ಕಾರ್ಕಳ ಬಳಿಯ ಅಜೆಕಾರಿನ ಪ್ರಕಾಶ್ ಪೂಜಾರಿ ಎಂಬವರಿಂದ ಖರೀದಿಸಿದ್ದ ಕೂಸ ಪೂಜಾರಿ ತನ್ನ ಮನೆಗೆ ಒಯ್ಯುತ್ತಿದ್ದರು. ಅಬ್ದುಲ್ ರೆಹಮಾನ್ ಅವರ ಪಿಕಪ್ ವಾಹನದಲ್ಲಿ ತರುತ್ತಿದ್ದಾಗ ಸಂಘಪರಿವಾರದ ಕಾರ್ಯಕರ್ತರು ಕಾಂತಾವರ ಕ್ರಾಸ್ ಬಳಿ ಯುವಕರು ಅಡ್ಡ ಹಾಕಿದ್ದಾರೆ.
ಈ ವೇಳೆ, ಸ್ಥಳೀಯ ಪಂಚಾಯತ್ ಪರವಾನಗಿ ಹೊಂದಿರುವ ಬಗ್ಗೆ ತಿಳಿಸಿದರೂ, ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ. ಈ ಬಗ್ಗೆ ಮೂಡುಬಿದರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸುರತ್ಕಲ್ ಮೂಲದ ಧನರಾಜ್ ಮತ್ತು ಕಡಂದಲೆಯ ಸುಧೀರ್ ಶೆಟ್ಟಿ ಎಂಬವರನ್ನು ಬಂಧಿಸಿದ್ದಾರೆ.

ಗಾಯಗೊಂಡ ಕೂಸ ಪೂಜಾರಿ (56) ಮೂಡುಬಿದ್ರೆ ಆಳ್ವಾಸ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಬ್ದುಲ್ ರೆಹಮಾನ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.