March 22, 2026

ಪುತ್ತೂರು :ಯುವ ನಾಯಕ ಝೈನ್ ಆತೂರು ರವರ ನೇತೃತ್ವದಲ್ಲಿ ಸೌಹಾರ್ದ ಯೂತ್ ಪ್ರೆಂಡ್ಸ್ ಆತೂರು ಇದರ ವತಿಯಿಂದ ಫೆಬ್ರವರಿ 1 ಮತ್ತು 2ರಂದು ಹತ್ತು ಬಡ ಕುಟುಂಬಕ್ಕೆ ಕಿಟ್ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಜೊತೆಗೆ ಗ್ರಾಮ ಗ್ರಾಮಗಳ ಅಂಡರ್ ಅರ್ಮ್ ಕ್ರಿಕೆಟ್ ಪಂದ್ಯಾವಳಿ ಆತೂರು ಶಾಲಾ ಮೈದಾನದಲ್ಲಿ ನಡೆಯಲಿದೆ.

ಹಲವಾರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸೌಹಾರ್ದ ಯೂತ್ ಪ್ರೆಂಡ್ಸ್ ಆತೂರು ಇದರ ಪ್ರಥಮ ವರ್ಷದ ಅಂಗವಾಗಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಟ ನಡೆಯಲಿದೆ.
ಎರಡು ದಿನದಲ್ಲಿ ವಿವಿಧ ಕಾರ್ಯಕ್ರಮ ಜರುಗಲಿದ್ದು. ಈ ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನಸಭೆ ಇದರ ಸಭ್ಯಾಧಕ್ಷರಾದ ಯುಟಿ ಖಾದರ್ ಹಾಗೂ ರಾಜ್ಯ ಮತ್ತು ಜಿಲ್ಲೆಯ ಹಲವು ರಾಜಕೀಯ ನಾಯಕರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.