February 4, 2026
IMG-20251031-WA0079

ಮಂಗಳೂರು : ಕ್ರೀಡಾ ಕ್ಷೇತ್ರಕ್ಕೆ ಮೀಸಲಾಗಿದ್ದ ಸಮಾಜಮುಖಿ ಯುವಕರ ತಂಡವಾದ ಆಝದ್ ಯೂತ್ ಕಲ್ಚರಲ್ ಅಸೋಸಿಯೇಷನ್ (ರಿ) ಇದರ ಹಲವು ವರ್ಷಗಳ ಸಾಮಾಜಿಕ ಕಾರ್ಯ ನಿರ್ವಹಣೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ.

1999 ರಲ್ಲಿ ಸ್ಥಾಪನೆಗೊಂಡ ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಯಾವುದೇ ಧರ್ಮ,ಜಾತಿ ನೋಡದೆ ಬಡಜನರ ಸೇವೆಗೈಯುತ್ತಾ ಬಂದಿರುವ ತಂಡ, ಹಲವು ಬಡನಿರ್ಗತಿಕರ ಪಾಲಿನ ಆಶಾಕಿರಣವಾಗಿದೆ. ಈ ಸಾಮಾಜಿಕ ಕಳಕಳಿಯುಳ್ಳ ಯುವಕರ ತಂಡವು ಯಾವುದೇ ಸಂದರ್ಭದಲ್ಲೂ ಯಾವುದೇ ಸಹಾಯಕ್ಕೂ ಅಂಜದೆ ಸನ್ನದ್ದರಾಗಿರುವ ತಂಡವಾಗಿದೆ. ಇದೀಗ ಜಿಲ್ಲಾಪ್ರಶಸ್ತಿಗೆ ಆಯ್ಕೆಗೊಂಡಿರುವ ಆಝದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಇದರ ಆಧಾರಸ್ತಂಭಗಳಾಗಿರುವ ಸದಸ್ಯರಿಗೂ ಆನಿವಾಸಿ ಸದಸ್ಯರಿಗೂ ಈ ಪ್ರಶಸ್ತಿ ಮುಂದೆ ಇನ್ನಷ್ಟು ಉತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸಲು ಪ್ರೇರಣೆಯಾಗಿಲಿ.