ಫ್ರೆಂಡ್ಸ್ ಗೂಡಿನಬಳಿ ವತಿಯಿಂದ ಶೇಖ್ ಮುತ್ತಲಿಬ್ ತಂಙಳ್ ಉರೂಸ್ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಬಿ.ಸಿ.ರೋಡ್: ಫ್ರೆಂಡ್ಸ್ ಗೂಡಿನಬಳಿ ಸಂಘಟನೆಯ ವತಿಯಿಂದ ಬೃಹತ್ ರಕ್ತದಾನ ಶಿಬಿರವು ಮೇ 10 ಆದಿತ್ಯವಾರದಂದು ಗೂಡಿನಬಳಿಯ ಹಯಾತುಲ್ ಇಸ್ಲಾಂ ಶಾಲೆ ವಠಾರದಲ್ಲಿ ಆಯೋಜಿಸಲಾಗಿದೆ.
ಶೇಖ್ ಮುತ್ತಲಿಬ್ ತಂಙಳ್ ಉರೂಸ್ ಪ್ರಯುಕ್ತ ಸತತ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶಿಬಿರವು ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಕಾರದೊಂದಿಗೆ ನಡೆಯಲಿದೆ.
ಸ್ಥಳೀಯರ ಆರೋಗ್ಯ ಮತ್ತು ಸಮಾಜದ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವಿರುವ ರೋಗಿಗಳಿಗೆ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ.
ಶಿಬಿರದಲ್ಲಿ ತಜ್ಞ ವೈದ್ಯರು ಮತ್ತು ದಾದಿಯರ ತಂಡವು ಭಾಗವಹಿಸಿ ರಕ್ತದಾನ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ನಿರ್ವಹಿಸಲಿದ್ದಾರೆ. 18 ವರ್ಷ ಮೇಲ್ಪಟ್ಟ ಆರೋಗ್ಯವಂತ ಪುರುಷ ಮತ್ತು ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಬಹುದು. ರಕ್ತದಾನವು ಸಂಪೂರ್ಣ ಸುರಕ್ಷಿತ ಮತ್ತು ನೋವು ರಹಿತವಾಗಿದ್ದು, ದಾನಿಗಳ ಆರೋಗ್ಯವನ್ನು ಪರೀಕ್ಷಿಸಿದ ನಂತರವೇ ರಕ್ತ ಸಂಗ್ರಹಿಸಲಾಗುತ್ತದೆ.
ಫ್ರೆಂಡ್ಸ್ ಗೂಡಿನಬಳಿ ಸಂಘಟನೆಯ ಸದಸ್ಯರು ಈ ಶಿಬಿರದ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡುವ ಜೊತೆಗೆ, ಯುವಕರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದಾರೆ.
ಶಿಬಿರಕ್ಕೆ ಸ್ಥಳೀಯ ನಾಗರಿಕರು, ಯುವಕರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಪುಣ್ಯಕಾರ್ಯಕ್ಕೆ ಕೈಜೋಡಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : +91 89715 68823 , +917349457805, +91 91641 31266 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
