Judges gavel in court room legal trial and law background
ನವದೆಹಲಿ: ಮಂಗಳೂರು ಮೂಲದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಚಿನ್ ಶೆಟ್ಟಿ @ ಸಚಿನ್ ಅವರಿಗೆ ಸುಪ್ರೀಂ ಕೋರ್ಟ್ ಜನವರಿ 7, 2026 ರಂದು ಜಾಮೀನು ಮಂಜೂರು ಮಾಡಿ, ಅವರ ಶಿಕ್ಷೆಯನ್ನು ಮೇಲ್ಮನವಿ ಬಾಕಿಯಿರುವವರೆಗೆ ಸ್ಥಗಿತಗೊಳಿಸಿದೆ. ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್‌ನ ಜನವರಿ 15, 2025ರ ಆದೇಶವನ್ನು ರದ್ದುಪಡಿಸಿದೆ.

ಈ ಪ್ರಕರಣದಲ್ಲಿ ಈಗಾಗಲೇ ಸಹ-ದೋಷಿಗಳಾದ ಗಣೇಶ್ ಕುಲಾಲ್ ಹಾಗೂ ಪ್ರವೀಣ್ ಪೂಜಾರಿ ಅವರಿಗೆ ಜಾಮೀನು ಮಂಜೂರಾಗಿರುವುದನ್ನು ಗಮನಿಸಿದ ನ್ಯಾಯಾಲಯ, “ಸಮಾನ ಸ್ಥಿತಿಯಲ್ಲಿರುವ ಅಪೀಲ್ದಾರನಿಗೂ ಅದೇ ಸೌಲಭ್ಯ ನೀಡಬೇಕು” ಎಂದು ಅಭಿಪ್ರಾಯಪಟ್ಟಿದೆ.
ಸಚಿನ್ ಶೆಟ್ಟಿ ಅವರನ್ನು 2019ರಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ, ಮುಖ್ಯವಾಗಿ ಸೆಕ್ಷನ್ 302ನ್ನು ಸೆಕ್ಷನ್ 149ರೊಂದಿಗೆ ಓದಿಕೊಂಡು ದೋಷಿಯಾಗೆಣಿಸಲಾಗಿತ್ತು. ಆರೋಪದ ಪ್ರಕಾರ, 2017ರ ಡಿಸೆಂಬರ್ 25ರಂದು ಕ್ರಿಸ್‌ಮಸ್ ದಿನ, ಅಪರಾಧಿಯಾಗಿ ಗುರುತಿಸಲ್ಪಟ್ಟಿದ್ದ ಮೆಲ್ರಿಕ್ ಡಿಸೋಜಾ ಎಂಬವರನ್ನು ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಅಪೀಲ್ದಾರರ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ದಿಲ್ರಾಜ್ ರೋಹಿತ್ ಸಿಕ್ವೇರಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಅವರ ಸಹಾಯಕರಾಗಿ ಧನರಾಜ್ ಪೂಜಾರಿ ಜೊತೆಯಲ್ಲಿದ್ದರು.
