June 22, 2026
20240608_WBP001

ಸೌದಿ ಅರೇಬಿಯಾದ ತೈಲ ಬಂದರಿನ ಮೇಲೆ ಇರಾನ್​ ಡ್ರೋನ್​ ದಾಳಿ ಮಾಡಿದೆ. ಇದರಿಂದ ವಿಶ್ವದ ಅತಿದೊಡ್ಡ ತೈಲ ಕೇಂದ್ರದ ಕಾರ್ಯಾಚರಣೆ ಸ್ಥಗಿತವಾಗಿದೆ. ಈ ಬೆನ್ನಲ್ಲೇ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್ ದಾಳಿ ನಡೆದಿದೆ. ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಘಟಕವೆಂದೇ ಪ್ರಸಿದ್ಧವಾದ ಈ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸೌದಿ ಅರಾಮ್ಕೊ ಕಂಪನಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮೂಲಗಳ ಪ್ರಕಾರ, ಡ್ರೋನ್‌ಗಳು ಇರಾನ್‌ನಿಂದ ಬಂದವು ಎಂದು ಹೇಳಲಾಗುತ್ತಿದೆ.

ಸೌದಿ ಅರಾಮ್ಕೊ
ವಿಶ್ವದ ಅತಿ ದೊಡ್ಡ ತೈಲ ಕಂಪನಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕಿತ್ತಾಟದಿಂದ ಬ್ರೆಂಟ್‌ ಕಚ್ಚಾ ತೈಲದ ಫ್ಯೂಚರ್‌ LCOc1 ಬೆಲೆ 10% ಏರಿಕೆಯಾಗಿದೆ.