ಸೈಯದ್ ಅಲ್ ಹಾದಿ ಶರಫುದ್ದೀನ್ ತಂಙಳ್ ನಿಧನ
ಪುತ್ತೂರು: ಪುತ್ತೂರಿನ ಸಾಲ್ಮರ ನಿವಾಸಿ ಬಹುಃ ಸೈಯದ್ ಅಲ್ ಹಾದಿ ಶರಫುದ್ದೀನ್(50ವ )ತಂಙಳ್ ಅವರು ಮಂಗಳೂರಿನ ಕೊಡಿಯಾಲ್ ಬೈಲ್‌ನ ಯಾನಪೋಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರು ಮರ್ಹೂಮ್ ಬಹುಃ ಸೈಯದ್ ಹಸನ್ ಕೋಯ ತಂಙಳ್ ಅವರ ಪುತ್ರರಾಗಿದ್ದರು. ಮೃತರು ಪತ್ನಿ ಹಾಗೂ ಪುತ್ರ ಬಹುಃ ಸೈಯದ್ ಅಲ್ ಹಾದಿ ಹಸನುಲ್ ಆಶ್ಹರಿ ತಂಙಳ್, ಸಹೋದರರಾದ ಸೈಯದ್ ಅಲ್ ಹಾದಿ ಇಬ್ರಾಹಿಮ್ ತಂಙಳ್ ಆತೂರು ಮತ್ತು ಪುತ್ತೂರಿನ ಪೋಳ್ಯ ಜುಮಾ ಮಸೀದಿಯ ಖತೀಬ್ ಸೈಯದ್ ಅಲ್ ಹಾದಿ ಯಹ್ಯಾ ತಂಙಳ್ ಸಾಲ್ಮರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ :
ಪುತ್ತೂರು ಸಾಲ್ಮರದ ದಾರುಲ್ ಹಸನಿಯ್ಯಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರೂ ಹಲವಾರು ಮಸೀದಿಗಳ ಗೌರವಧ್ಯಕ್ಷರೂ ಆಧ್ಯಾತ್ಮಿಕ ನಾಯಕರೂ ಆಗಿದ್ದ ಸೈಯದ್ ಶರಪುದ್ದೀನ್ ತಂಙಳ್ ನಿಧನಕ್ಕೆ ರಾಜ್ಯ ದಾರಿಮಿ ಉಲಮಾ ಒಕ್ಕೂಟ ತೀವ್ರ ಸಂತಾಪ ಸೂಚಿಸಿದೆ.
ಸೈಯದರ ಅಕಾಲಿಕ ನಿಧನವು ಸಮುದಾಯಕ್ಕೆ ತುಂಬಲಾಗ ನಷ್ಟವನ್ನುಂಟು ಮಾಡಿದೆ ಎಂದು ಒಕ್ಕೂಟ ಅಧ್ಯಕ್ಷ ಎಸ್ ಬಿ ದಾರಿಮಿ,ಪ್ರಧಾನ ಕಾರ್ಯದರ್ಶಿ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
